ನನ್ನೊಡಲೊಳಗಿನ ನಮ್ಮೂರ ಶಾಲೆ – ಕಿರು ಆವಲೋಕನ


Write Comment     |     E-Mail To a Friend     |     Facebook     |     Twitter     |     Print
ನನ್ನೊಡಲೊಳಗಿನ ನಮ್ಮೂರ ಶಾಲೆ – ಕಿರು ಆವಲೋಕನ

 

                                          


Dr Norbert Lobo

 

 

 

Dr Norbert Lobo, M.A., M. H. R. M., M. Phil, Ph. D. is teaching Economics at St. Aloysius College (Autonomous), Mangalore since 1991. At present he is the Associate Professor and Head, Dept of Economics,Visiting Faculty to the PG Dept of Economics and Chief –Editor of Al-Shodhana: A Bi-Annual Multi Disciplinary Refereed Research Journal with ISSN Assignment, published by St Aloysius College (Autonomous).

 

Dr Lobo has authored the following books: Migration and Migrants, Rural-Urban Migration and Rural Unemployment in India, Indian Economy, Money and Public Finance, Indian Economy : Issues and Reforms  and  was member of the editorial committee of the books Privatisation of Commercial Banks: Present Position and Future Options, Indian Banking: Issues and Concerns.  Several of his research articles have been published in reputed research journals.

 

A well known career counsellor and trainer, Dr Lobo has conducted over 550 workshops/programmes for students and parents at different places and for various faculties, contributed over 60 articles, presented 23 radio programmes and served as a resource person in live–in –programmes on radio and cable TV on career guidance and planning.

 

Dr Lobo is widely appreciated for his leadership and organisational skills. Presently he is the President of Association of Mangalore University College Teachers-AMUCT, Vice –President of Federation of University and College Teachers’ Associations in Karnataka-FUCTAK and has the distinction of being the first person from colleges under Mangalore University to be elected to the post of Vice-President of All India Federation of University and College Teachers’ Organisations –AIFUCTO, the largest college teachers organisation in the world.

 

 

 

ನನ್ನೊಡಲೊಳಗಿನ ನಮ್ಮೂರ ಶಾಲೆ – ಕಿರು ಆವಲೋಕನ

ಡಾ. ನೋರ್ಬರ್ಟ್ ಲೋಬೊ
1971-1978 ಸಾಲಿನಲ್ಲಿ ವಿದ್ಯಾರ್ಥಿ

 

"ಐಯಾಮ್ ವೊಟ್ ಐಯಾಮ್ ಟುಡೆ ಬಿಕೊಸ್ ಅಪ್ ಎಡ್ಯುಕೇಷನ್" –  ಭಾರತದ ಪ್ರಾಧನ ಮಂತ್ರಿ ಡಾ. ಮಾನ್‍ಮೋಹನ್ ಸಿಂಗ್‍ರವರು ಶಿಕ್ಷಣದ ಹಕ್ಕು ಕಾಯ್ದೆ 2010 ಜಾರಿಗೆ  ತಂದ ಚಾರಿತ್ರಿಕ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ ಮಾತು.

 

ನಮ್ಮೂರು - ನಮ್ಮ ಶಾಲೆ


"ಅನುಭವವು ಸವಿಯಲ್ಲ; ಆದರ ನೆನಪೇ ಸವಿಯು" ಎಂಬ ಮಾತಿದೆ. ಗತಿಸಿ ಹೋದ ಆ ದಿನಗಳು, ಆ ದಿನಗಳಲ್ಲಿನ ಅನುಭವ, ಆ ಅನುಭವದ ಹಿಂದಿನ ಸನ್ನಿವೇಶಗಳು ಮತ್ತು ಅದರ ಸುತ್ತಮುತ್ತ ಜರಗುವ ವಿವಿಧ ಚಟುವಟಿಕೆಗಳು, ಅವುಗಳ ಕುರಿತಂತೆ ನಾವು ಮಾಡುವ ಕಲ್ಪನೆಗಳು ಮತ್ತು ಗ್ರಹಿಕೆಗಳು, ಇತರರಿಂದ ಕೇಳಿಸಿಕೊಳ್ಳುವ ಪ್ರಶಂಸನೀಯ ಮಾತುಗಳು ಆಥವಾ ಕೆಣಕುವ ಬಿಚ್ಚುನುಡಿಗಳು, ಇವೆಲ್ಲರ ಅನುಭವದಿಂದ ನಾವು ಕಲಿಯುವ ಆಥವಾ ಕಲಿಯದ ಪಾಠಗಳು ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಗಾಢವಾದ ಮತ್ತು ಮಹತ್ತರವಾದ ಪರಿಣಾಮ ಬೀರುತ್ತವೆ. ಕಹಿ ಅನುಭವವನ್ನು ಮರೆತು, ಸಿಹಿ ಅನುಭವವನ್ನು ಮೆಲುಕು ಹಾಕುತ್ತಾ ಬಾಳುವುದೇ ಜೀವನದ ಸಾರ್ಥಕತೆ ಎಂದು ನನ್ನ ನಂಬಿಕೆ. ಕರಾವಳಿ ಕರ್ನಾಟಕದಲ್ಲಿ ಆಗಿರುವ ಶೈಕ್ಷಣಿಕ ಕ್ರಾಂತಿಗೆ ಕಥೋಲಿಕ್ ಧರ್ಮಸಭೆಯು ನೀಡಿದ ಕೊಡುಗೆ ವಿಶೇಷ ಮತ್ತು ವಿಶಿಷ್ಠವಾಗಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಇಗರ್ಜಿಶಾಲೆಗಳ ಸೇವೆ ಮತ್ತು ತ್ಯಾಗ ಮಹತ್ತರವಾದದ್ದು. ಎಲ್ಲೆಲ್ಲಾ ಇಗರ್ಜಿಗಳು ಸ್ಥಾಪಿಸಲಾಯಿತೊ, ಅಲ್ಲೆಲ್ಲಾ ಶಾಲೆಗಳನ್ನು ಪ್ರಾರಂಬಿಸಲಾಗಿದೆ. ಹೆಚ್ಚಿನ ಇಗರ್ಜಿ ಶಾಲೆಗಳಿಗೆ ಶತಮಾನಕ್ಕೂ  ಮಿಗಿಲಾದ ಇತಿಹಾಸವಿದೆ. ಇತ್ತೀಚಿಗಷ್ಠೆ ತನ್ನ ಅಸ್ತಿತ್ವದ ಶತಮಾನೋತ್ಸವ ಆಚರಿಸಿದ ಬೆಳ್ಳೆ ಸಂತ ಲಾರೆನ್ಸ್ ಧರ್ಮಸಭೆಯ ಆಧೀನದಲ್ಲಿರುವ ನನ್ನ ಶಾಲೆ ತನ್ನ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವುದು ನನಗೆ ಹೆಮ್ಮೆಯ, ಸಾರ್ಥಕತೆಯ ಮತ್ತು ಹರುಷದ ಘಟನೆ. ಶತಮಾನೋತ್ಸವನ್ನು ಆಚರಿಸುವ ಸೌಭಾಗ್ಯಪಡೆದ ಎಲ್ಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶತಮಾನೋತ್ಸವ ಸಮಾರಂಭ ಆಚರಣಾ ಸಮಿತಿಯ ಸರ್ವರಿಗೆ ನನ್ನ ಅಭಿನಂದನೆಗಳು.

 

ದಕ್ಷಿಣ, ಪಶ್ಚಿಮ ಮತು ಉತ್ತರದ ಮೂರು ಮಗ್ಗುಲಲ್ಲಿ ನದಿಗಳು ಹಾಗೂ ಪೂರ್ವದಲ್ಲಿ ಕಾಡು ಮತ್ತು ಬೆಟ್ಟಗುಡ್ಡೆಗಳಿಂದ ಸುತ್ತುವರಿದ ಮೂಡುಬೆಳ್ಳೆ ಹಾಗೂ ಕಟ್ಟಿಂಗೇರಿ ಗ್ರಾಮಗಳು ಶತಮಾನದ ಹಿಂದೆ ಬಹಳಷ್ಟು ಹಿಂದುಳಿದ, ಬಡತನ ಆನರಕ್ಷತೆ, ಆಜ್ಞಾನÀ, ಮೂಡನಂಬಿಕೆಗಳಿಂಸ ಆವರಿಸಲ್ಪಟ್ಟ ಕೃಷಿ ಪ್ರಧಾನ ಅವಳಿಹಳ್ಳಿಗಳು. ಇಂತಹ ಕುಗ್ರಾಮದ ಜನರಿಗೆ ಪ್ರಾಥಮಿಕ ಮೂಲ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭವಾದ ಬೆಳ್ಳೆ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಂದಿನಿಂದ ಇಂದಿನವರೆಗೆ ನಾಲ್ಕು ತಲೆಮಾರಿನ ಹತ್ತು ಹಲವಾರು ಸಾವಿರ ಎಳೆಯ ಮನಸ್ಸುಗಳಿಗೆ ವಿದ್ಯಾರ್ಜನೆ ನೀಡಿ, ನಮ್ಮ ಸಮಾಜದ ಮತ್ತು ರಾಷ್ಟ್ರದ ಸತ್‍ಪ್ರಜೆಗಳನ್ನಾಗಿ ರೂಪಿಸಿದೆ. ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗಿ ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ, ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ತಮ್ಮ ಜೀವನವನ್ನು ಪಾವನಮಾಡಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಈ ಪರಿಸರದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಕೌಟುಂಬಿಕ ಪ್ರಗತಿ ಮತ್ತು ಏಳಿಗೆಯಲ್ಲಿ ಈ ಶಾಲೆಯ ಪಾತ್ರ ಆಂದಾಜು ಮಾಡಲು ಆಸಾಧ್ಯವಾದುದು. ಗತ ನೂರು ವರ್ಷಗಳಲ್ಲಿ ಎಷ್ಟೋ ಶಿಕ್ಷಕರು, ಹಲವಾರು ಸಂಚಾಲಕರು ಸಲ್ಲಿಸಿದ ಸತತ ಸೇವೆಯ ಪರಿಶ್ರಮದ ಫಲವಾಗಿ ಈ ಪರಿಸರದ ಅದೆಷ್ಟೋ ಸಹಸ್ರ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮ ಶಿಕ್ಷಣ ಲಭಿಸಿದೆ. "ಕತ್ತಲೆಗೆ ದೂರುವುದಕ್ಕಿಂತ ಒಂದು ದೀಪವನ್ನು ಹಚ್ಚು" ಎಂಬ ಮಾತಿನಂತೆ ನಮ್ಮೂರಿನಲ್ಲಿ ಕಳೆದ ನೂರು ವರ್ಷಗಳಿಂದ ವಿದ್ಯಾ ದೀಪವನ್ನು ಹಚ್ಚಿ  ಜ್ಞಾನದ ಬೆಳಕನ್ನು ಪಸರಿಸುತ್ತಿರುವ ಎಲ್ಲಾ ಶಿಕ್ಷಕರನ್ನು, ಸಂಚಾಲಕರವರನ್ನು ಹಾಗೂ ಶಾಲಾ ಆಡಳಿತಮಂಡಳಿಯನ್ನು ಅಭಿನಂದನಾಪೂರ್ವಕವಾಗಿ ಸ್ಮರಿಸುತ್ತ್ತೇನೆ. ಆನೇಕ ಸಲ ಈ ಶಾಲೆ ಇಲ್ಲದಿರುತ್ತಿದ್ದರೆ ನಾನು ಏನಾಗಿರುತ್ತಿದ್ದೆ, ಎಲ್ಲಿರುತ್ತಿದ್ದೆ ಎಂದು ಯೋಚಿಸಲು ಸಾದ್ಯವಾಗದೆ ಮಂಕಾಗುತ್ತೇನೆ. ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ರಸ್ತೆ, ವಾಹನ, ವಿದ್ಯುತ್, ಸೇತುವೆ ಇಲ್ಲದಿದ್ದ ಅನೇಕ ಹಳ್ಳಿಯ ಮಕ್ಕಳಿಗೆ ವಿದ್ಯೆಯನ್ನು ನೀಡಿದ ಶಾಲೆ, ಇನ್ನೊಬ್ಬರ ನಂಬಿಕೆ, ಸಂಸ್ಕøತಿ ಮತ್ತು ಲೋಕದೃಷ್ಟಿಯನ್ನು ಗೌರವಿಸುವ ಸಹನೆಯ ಪಾಠವನ್ನು ಕಲಿಸಿ, ನನ್ನ ಬದುಕಿನುದ್ದಕ್ಕೂ ನನ್ನ ಜೊತೆಯಾಗಿ ನಿಂತಿದೆ. ಅಂದು ನಮ್ಮ ಶಾಲೆಯಲ್ಲಿ / ತರಗತಿಯಲ್ಲಿ  ಆನೇಕ ಸಂಸ್ಕøತಿಯ ಮಕ್ಕಳು ಇದ್ದರು ಅದರೆ ಇಂದು ನಾವು ಹೇಳುವ  ಜಾತಿ ಧರ್ಮಗಳ ಭೇದ ಆವತ್ತು ಆ ಶಾಲೆಯಲ್ಲಿ ಇರಲಿಲ್ಲ.

 

ಈ ಪ್ರಸಿದ್ದ ಶಾಲೆಯ ಹಳೆವಿದ್ಯಾರ್ಥಿಗಳಲ್ಲಿ ನಾನು ಒರ್ವನೆಂಬುವುದೇ ನನ್ನ ಸಾಧನೆ. ಸುಮಾರು ಮೂವತೈದು ವರ್ಷಗಳ ಹಿಂದೆ ನಾನೂ ಶಿಕ್ಷಣ ಮುಗಿಸಿದ ಈ ಶಾಲೆಯ ವಿದ್ಯಾರ್ಥಿಯಾಗಿ ನನ್ನ ನೆನಪಿನಂಗಳದಲ್ಲಿ ಜೀವಂತವಾಗಿರುವ ಅನುಭವಗಳನ್ನು ನೆನಪಿಸಿ ಆ ಸನ್ನಿವೇಶಗಳನ್ನು ನೆನಪಿನ ಸರಮಾಲೆಯಲ್ಲಿ ನೋಡುವ ಪ್ರಯತ್ನವೆ ಈ ಲೇಖನ.

 

ನನ್ನ ಶಿಕ್ಷಕರು - ತರಗತಿಯ ಕೋಣೆಗಳು

ನಾನು ಶಾಲೆಗೆ ಸೇರಿದ್ದು 1971 ಎಪ್ರೀಲ್ ತಿಂಗಳಲ್ಲಿ. ಒಂದನೇ ತರಗತಿಯಲ್ಲಿ ದಿ.ಮೇರಿ ಟೀಚರ್ ನಮಗೆ ಕ್ಲಾಸ್‍ಟೀಚರ್. ನಮ್ಮ ಕ್ಲಾಸ್ ರೂಮ್ ಶಾಲಾಕಟ್ಟಡದ ಪೂರ್ವಮಗ್ಗಲಿನ ( ದುಗ್ಗಪ್ಪಣ್ಣನ ಇಸ್ತ್ರಿ ಆಂಗಡಿಯ ಸಮೀಪ) ಮೊದಲನೆಯ ಕೋಣೆ. ಎರಡನೆಯ ತರಗತಿಗೆ ನಮ್ಮ ಕ್ಲಾಸ್ ಪಶ್ಚಿಮಮಗ್ಗಲಿನ (ಹುಣಸೆ ಮರದ ಹತ್ತಿರ) ಒಳಗಿನ ಕೋಣೆ. ದಿ. ಪೆಲಿಕ್ಸ್ ಮಾಸ್ಟರ್  ನಮ್ಮ ಕ್ಲಾಸ್‍ಟೀಚರ್. ಮೂರನೇ ತರಗತಿ ಹಳೆಯ ಸಣ್ಣ ಹಾಲಿನಲ್ಲಿ(ಈಗ ಆ ಹಾಲ್ ಇಲ್ಲಾ) ಮರದ ತಟ್ಟಿಯಿಂದ ಬೇರ್ಪಡಿಸಿದ ಕೊಠಡಿ. ದಿ. ಲಾರೆನ್ಸ್ ಮಾಸ್ಟರ್( ಹೋಲಿಗೆ ಮಾಸ್ಟರ್) ನಮ್ಮ ಕ್ಲಾಸ್‍ಟೀಚರ್. ನಾಲ್ಕನೇ ತರಗತಿಗೆ ವಿವಿಧ ವಿಷಯಕ್ಕೆ ಬೇರೆ ಬೇರೆ ಶಿಕ್ಷಕರು ಬರುತ್ತಿದ್ದ ನೆನಪು. ಅವರಲ್ಲಿ ಒಬ್ಬರು ಲಿಲ್ಲಿ ಟೀಚರ್ (ಕಾನ್ವೆಂಟ್ ಹತ್ತಿರ) ಇನ್ನೊಬ್ಬರು ಸಿಸ್ಟರ್. ಆವರ ಹೆಸರು ಸರಿಯಾಗಿ ನೆನಪಿಲ್ಲಾ, ಹೈಸ್ಕೂಲ್‍ಗೆ ಮೆಟ್ಟಲು ಹತ್ತಿ ಹೋಗುವ ಕಾಲುದಾರಿಯ ಪಕ್ಕದಲ್ಲಿದ್ದ ಸಣ್ಣ ಕೋಣೆಯಲ್ಲಿ ನಮ್ಮ ತರಗತಿಯಿತ್ತು. ಐದನೇ ತರಗತಿಗೆ ಸಿ.ಕ್ರಿಸಾಂತ ನಮ್ಮ ಕ್ಲಾಸ್‍ಟೀಚರ್, ದೊಡ್ಡ ಹಾಲಿನಲ್ಲಿ ಮರದ ತಟ್ಟಿಯಿಂದ ಬೇರ್ಪಡಿಸಿದ ಕೊಠಡಿ ನಮ್ಮ ಕ್ಲಾಸ್ ರೂಮ್. ಅವರೊಂದಿಗೆ ದಿ. ಲಿಲ್ಲಿ ಟೀಚರ್(ಕಾರ್ಕಳದವರು, ತುಂಬಾ ಬಿಳಿಯಾಗಿ ನೋಡಲು ಬಹಳಷ್ಟು ಆಕರ್ಷಿಕವಾಗಿದ್ದರು, ಮಕ್ಕಳು ಅವರನ್ನು ಬೊಳ್ಳಿ ಟೀಚರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರು), ಹಾಗೂ ಹೆಡ್‍ಮಾಸ್ಟರ್ (ಬೆನ್ನಿ ಮಾಸ್ಟರ್) ರವರು ಶಿಕ್ಷಕರಾಗಿದ್ದರು. ಆಪೀಸ್ ಕೋಣೆಯ ಹತ್ತಿರದಲ್ಲಿರುವ ಬಲಮಗ್ಗಲಿನ  (ರಸ್ತೆಬದಿಯ) ಕಟ್ಟಡದಲ್ಲಿ ನಮ್ಮ ಆರನೇ ತರಗತಿಯ ಕೊಠಡಿ. ವಿಲ್ಲಿಮಾಸ್ಟರ್, ಕನ್ನಡ ಪಂಡಿತ್(ತಂತ್ರಿಮಾಸ್ಟರ್), ಹಿಂದಿ ಪಂಡಿತ್ (ವಾಗ್ಳೆ ಮಾಸ್ಟರ್), ಹಾಗೂ ಸಿ.ಯುವನೆಸ್ ನಮಗೆ ಶಿಕ್ಷಕರು. ಎಳನೇ ತರಗತಿಯು ಆಪೀಸ್ ಕೋಣೆಯ ಎಡಬದಿಯಲ್ಲಿರುವ ಕಟ್ಟಡದ ಎರಡನೇ ಕೊಠಡಿ. ಸದಾನಂದ ಮಾಸ್ಟರ್, ಸ್ತೆಲ್ಲಾ ಟೀಚರ್, ಆಲ್ಬರ್ಟ್ ಮಾಸ್ಟರ್, ಕನ್ನಡ ಪಂಢಿತ್  ಮತ್ತು ಹಿಂದಿ ಪಂಢಿತ್ ನಮಗೆ ವಿದ್ಯಾಭ್ಯಾಸ ನೀಡಿದ ಶಿಕ್ಷಕರು. ಇವರಲ್ಲದೆ ಆಗ ಶಾಲೆಯಲ್ಲಿ ಎವ್ಜಿನ್ ಟೀಚರ್(ಶ್ರೀಮತಿ ಎವ್ಜಿನ್ ಬರ್ಬೋಜ), ಲೀನಾ ಟೀಚರ್ (ಶ್ರೀಮತಿ ಲೀನಾ ಲೀಬೊ) ಮತ್ತು ಕೆಲವು ಧರ್ಮಭಗಿನಿಯರು ಶಿಕ್ಷಕಿಯಾರಾಗಿ ಸೇವೆ ಸಲ್ಲಿಸುತ್ತಿದ್ದರು. ಧರ್ಮಭಗಿನಿಯರ ಹೆಸರು ನೆನಪಿಲ್ಲಾ. ಕಾರಣ ಸರಳ, ನಾವೂ ಆಗ ಸಿಸ್ಟರ್‍ರವರನ್ನು ಹೆಸರಿನಿಂದ ಕರೆಯುವ ಆಥವಾ ಪರಿಚಯಿಸಿಕೊಳ್ಳುವ ಪದ್ಧತಿ ಇರಲ್ಲಿಲ್ಲಾ, ಅವರನ್ನು ಸಿಸ್ಟರ್ ಎಂದೇ ಗೌರವಪೂರ್ವಕವಾಗಿ ನೆನೆಸಿಕೊಳ್ಳುತ್ತಿದ್ದೆವು.

 

ದೊಡ್ಡ ಶಾಲೆ -ತುಂಬಾ ಮಕ್ಕಳು - ಸಣ್ಣ ಆಸೆ:

ಶಾಲೆಗೆ ಹೋದಾಗ ಅಂದು ಎಲ್ಲಾ ರೀತಿಯಲ್ಲೂ ದೊಡ್ಡದಾಗಿ ಕಾಣುತ್ತಿತ್ತು ನಮ್ಮ ಶಾಲೆ. ಶಾಲೆಗೆ ಕಾಲಿಟ್ಟಾಗ ಕಾಣಿಸಿತ್ತು ಮಕ್ಕಳ ದೊಡ್ಡ ಹಿಂಡು ಮತ್ತು ವಿಸ್ತಾರವಾದ ಬಿಲ್ಡಿಂಗುಗಳು. ಮೊದಲ ನಾಲ್ಕು ತರಗತಿಗಳಲ್ಲಿ ನಾಲ್ಕು-ನಾಲ್ಕು ವಿಭಾಗಗಳು ಮತ್ತು ಉಳಿದ ಮೂರು ತರಗತಿಗಳಲ್ಲಿ ಐದೈದು ವಿಭಾಗಗಳು. ಸುಮಾರು 1500 ಕ್ಕಿಂತ ಮಿಗಿಲಾಗಿ ಮಕ್ಕಳು ಶಾಲೆಯಲ್ಲಿ ಇದ್ದರು ಅಂತ ನೆನಪು. ಎಲ್ಲರೂ ನಡೆದುಕೊಂಡೇ ಶಾಲೆಗೆ ಬರುವ ಕಾಲವದು. ಮೂಢುಬೆಳ್ಳೆ, ಕಟ್ಟಿಂಗೇರಿ ಗ್ರಾಮಗಳಿಂದ ಮಾತ್ರವಲ್ಲದೆ, ದೂರದ ಮಾಣಿಬೆಟ್ಟು, ಪೊಡಿಕಂಬಳ, ಬಳಂಜಾಲೆ, ಎಡ್ಮೆರೂ, ನಿಂಜೂರೂ, ಮಲ್ಲೇಟ್ಟು, ಪಡುಬೆಟ್ಟು, ಮರ್ಣೆ, ಪೆರ್ನಾಂಕಿಲಾ, ಕನರಾಡಿ, ತೋಕೊಲಿ, ನೆಲ್ಲಿಕಟ್ಟೆ, ತಬೈಲ್, ತಿರ್ಲಪಲ್ಕೆ, ದೇವರಗುಡ್ಡೆ, ಪುತ್ರೊಟ್ಟ್ ಕಿನ್ನಿಗುಡ್ಡೆ, ಗುಡ್‍ದೊಟ್ಟ್, ಕುದುರು, ದಿಂದೊಟ್ಟ್, ಪಾಂಬೂರು, ಪಡುಬೆಳ್ಳೆ,  ಹೀಗೆ ಮೈಲುಗಳ ಆಂತರದಿಂದ ಸಣ್ಣ ಸಣ್ಣ ಮಕ್ಕಳೂ ಶಾಲೆಗೆ ಬರುತ್ತಿದ್ದರು. ಹೆಗಲಲ್ಲಿ ಪುಸ್ತಕದ ಚೀಲಾ ಮತ್ತು ಕೈಯಲ್ಲಿ ಊಟದ ಬುತ್ತಿ ಮತ್ತು ಮಳೆಗಾಲವಾದರೆ ಕೊಡೆ ಹಿಡಿದು ಗುಂಪು-ಗುಂಪಾಗಿ ನಡೆದು ಶಾಲೆಗೆ ಬರುವುದೇ ಒಂದು ಮನೋರಂಜನೆ ಅಂದರೆ ಆತೀಶಾಯೋಕ್ತಿ ಆಗಲಾರದು. ಬೆಳಿಗ್ಗೆ ಮತ್ತು ಸಾಂಯಕಾಲ ಶಾಲೆ ಆರಂಭ ಮತ್ತು ಮುಕ್ತಾಯವಾಗುವ ಸಮಯದಲ್ಲಿ ದಾರಿ ಉದ್ದಕ್ಕೂ ಶಾಲಾ ಮಕ್ಕಳ ಹಿಂಡು ಸಾಲು ಸಾಲಾಗಿ ನಡೆದು ಹೋಗುವುದು ಇಂದು ಊಹಿಸಲು ಆಸಾಧ್ಯವಾಗಿದೆ. ನಮ್ಮ ಕಟ್ಟಿಂಗೇರಿ ಗುಂಪಲ್ಲಿ ನಾವು ಕನಿಷ್ಟ 12 ರಿಂದ 15 ಮಂದಿ ಹುಡಗರು ಜೊತೆಯಾಗಿ ಆನೇಕ ವರ್ಷ ದಾರಿಯುದ್ದಕ್ಕೂ ಆ ಕಾಲದ ಎಲ್ಲಾ ಸಾಹಸ ಕೆಲಸ ಮಾಡುತ್ತಾ ಶಾಲೆಗೆ ಬರುವ ನೆನಪು ಇನ್ನೂ ನನ್ನಲ್ಲಿ ಹಚ್ಚಹಸುರಾಗಿದೆ, ಶಾಲೆಯಲ್ಲಿ ಬಿಸಿಊಟ ಇರಲಿಲ್ಲದಿದ್ದರೂ, ಶಾಲೆಗೆ ಹೋಗಬೇಕು, ಮೆಟ್ರಿಕ್ ಪಾಸ್ ಆಗಬೇಕು ಆಮೇಲೆ ಬೊಂಬಾಯಿಗೆ ಹೋಗಬೇಕು ಎಂಬ ಹಂಬಲ ನಮ್ಮೆಲ್ಲರಲ್ಲು ಆಳವಾಗಿ ಬೇರೂರಿತ್ತು. ಶಾಲೆ ಮನೆಯಿಂದ ಒಂದು ಮೈಲಿಗಿಂತ ದೂರದಲ್ಲಿದ್ದರೂ, ದಾರಿಯಲ್ಲಿ ಜಾರಿ ಬಿದ್ದು ಪೆಟ್ಟಾದರೂ, ಮಳೆಗಾಲದಲ್ಲಿ ನೆನೆದೂ ಮೈಯೆಲ್ಲಾ ಒದ್ದೆಯಾದರೂ ಶಾಲೆಗೆ ಹೋಗುತ್ತಿದ್ದೆವು. ಎಲ್ಲಾ ಪಾಠಗಳಲ್ಲಿ ಕೆಂಪು ಗೀಟ್ ತರದೆ ಪಾಸ್‍ಆಗಿ (35 ಅಂಕ)  ಮುಂದಿನ ತರಗತಿಗೆ ಪ್ರತಿ ವರ್ಷ ಹೋಗಬೇಕು ಎಂಬ ಆಸೆ ನಮ್ಮ ಗುಂಪಿನ ಪ್ರತಿಯೊರ್ವರಲ್ಲಿತ್ತು. ಪಾಸ್ ಅಂಕಗಳನ್ನು ಹೊರತು ಪಡಿಸಿ ಹೆಚ್ಚಿನ ಅಂಕಗಳ ಬಗ್ಗೆ ನಾವ್ಯಾರೂ ಎಂದೂ ತಲೆಕೆಡಿಸಿದವರಲ್ಲ ಮತ್ತು ಜಾಸ್ತಿ ಅಂಕ ಗಳಿಸಲು ನಮಗೆ ಸಾದ್ಯ ಅಂತ ಅನಿಸಲೂ ಇಲ್ಲ. ಒಳ್ಳೆಯ ಅಂಕ ಅಗತ್ಯ ಎಂದು ಕೂಡ ಗೊತ್ತಿಲ್ಲದ ಕಾಲವದು. !

 

ಬೇಸಿಗೆಯ ರಜೆ- ಬೇಸಾಯದ ಕೆಲಸ :

ಆಗ ಬೇಸಿಗೆಯ ರಜೆ ಇರುತ್ತಿರಲಿಲ್ಲ. ಬೇಸಿಗೆ ರಜೆಯನ್ನು ಜೂನ್ ತಿಂಗಳಲ್ಲಿ ಮಳೆಗಾಲದ ರಜೆ ಎಂದು ನೀಡುತ್ತಿದ್ದರು. ಹೆಸರಿಗೆ ಮಳೆಗಾಲದ ರಜೆಯಾದರೂ ಅದರ  ನೈಜ ಉದ್ದೇಶ ಬೇಸಾಯಾದ ಕೆಲಸಕ್ಕೆ ನಮ್ಮ ಮನೆಯವರೊಂದಿಗೆ ನಾವು ಸೇರಿ ಕೆಲಸಮಾಡಲು ಆಗಿತ್ತು. ಆ ದಿನಗಳಲ್ಲಿ ಮಳೆಗಾಲ ಸಾಮಾನ್ಯವಾಗಿ ಮೇ ತಿಂಗಳ ಕೊನೆವಾರದಲ್ಲಿ ಪ್ರಾರಂಭವಾಗುತ್ತಿತ್ತು. ಕೃಷಿಕಾರ್ಯಗಳು ಸಾಮಾನ್ಯವಾಗಿ ಜೂನ್ ತಿಂಗಳಕೊನೆಯವಾರದ ಒಳಗೆ ಮುಗಿಯುತ್ತಿದ್ದವು. ನಮ್ಮ ಹೆಚ್ಚಿನ ಶಿಕ್ಷಕರು ಮತ್ತು ಸಾಮಾನ್ಯವಾಗಿ ಎಲ್ಲಾ ಮಕ್ಕಳು ಕೃಷಿಕಾರ್ಯಕ್ಕೆ ಸಂಬÀಂದಿಸಿದ ಕೆಲಸಗಳನ್ನು ಪ್ರತಿನಿತ್ಯ ಮಾಡಿ ಶಾಲೆಗೆ ಬರುತ್ತಿದ್ದರು. ಆಕ್ಟೋಬರ್ ರಜೆಯಲ್ಲಿ ಪ್ರತಿಯೊರ್ವ ವಿದ್ಯಾರ್ಥಿ ಸಂಪೂರ್ಣವಾಗಿ ಕೃಷಿಕಾರ್ಯದಲ್ಲಿ ತಮ್ಮನ್ನು  ತೊಡಗಿಸಿಕೊಳ್ಳುವುದು ಅನೀವಾರ್ಯವಾಗಿತ್ತು. ಅಂದಿನ ಸಮಾಜದಲ್ಲಿ ಕೃಷಿಯಾದರಿತ ಕುಟಂಬಗಳಲ್ಲಿ ಬಾಲಕಾರ್ಮಿಕ ಪದ್ದತಿಬಗ್ಗೆ ಯಾರೂ ತಲೆ ಕೆಡಿಸುತ್ತಿರಲಿಲ್ಲಾ ಅಂತ ನನ್ನ ಆನಿಸಿಕೆ. ಆಕ್ಟೋಬರ್ ರಜೆಯಲ್ಲಿ ನಮೆಗೆಲ್ಲರಿಗೂ ಪ್ರತಿ ವರ್ಷ ಇನ್ನೊಂದು ಡ್ಯೂಟಿಯಿತ್ತು. ಅದರ ಹೆಸರು ಕೋಣೆ ತುಂಬಿಸುವುದು. ಶಾಲೆಯಲ್ಲಿನ ಆಭಿವೃಧ್ದಿ ಕೆಲಸಗಳಿಗೆ ಹಣ ಜೋಡಿಸಲು ಪ್ರತಿವಿದ್ಯಾರ್ಥಿಯು ಕನೀಷ್ಟ ಒಂದು ಪೇಪರಿನ ಎರಡು ಬದಿಯ ಒಟ್ಟು 50 ಕೋಣೆಗಳನ್ನು ತುಂಬಿಸಿ ತರಬೆಕಿತ್ತು. ಒಂದು ಕೋಣೆಗೆ 10 ಪೈಸೆ ಮತ್ತು ಒಟ್ಟು ಐದು ರೂಪಾಯಿ. ಪ್ರತಿ ಕೋಣೆಗೆ ಒಂದು ನಂಬರಿತ್ತು ಮತ್ತು ಸರದಿ ಮೇಲೆ ಚೀಟಿ ಎತ್ತುವ ಮೂಲಕ ಅದೃಷ್ಟ ನಂಬರನ್ನು ಆರಿಸಿ, ವಿಜೆತರಿಗೆ ಆಕರ್ಷಕ ಬಹುಮಾನಗಳನ್ನು ನೀಡುತ್ತಿದ್ದರು. ಎಲ್ಲರ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದುದರಿಂದ ಇತರರಿಂದ ಕೋಣೆತುಂಬಿಸಿಕೊಳ್ಳುವುದು ಅಸಾದ್ಯವಾಗಿತ್ತು. ಐದು ರೂಪಾಯಿ ಪಡೆಯಲು ಮನೆಯವರು ಹೇಳಿದ ಎಲ್ಲಾ ಹೆಚ್ಚುವರಿ ಕೆಲಸ ಮಾಡುವ ಅನಿವಾರ್ಯತೆ ಎಲ್ಲಾ ಶಾಲಾ ಮಕ್ಕಳದ್ದು!

 

ಪಾಸ್ ಆದರೆ ಶಾಲೆ -ಪೈಲ್ ಆದರೆ ಬೇಸಾಯ:

ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಮುಗಿದ ನಂತರ "ಪಾಸ್-ಪೈಲ್ ಪಟ್ಟಿ" ಸದರಿಯಮೇಲೆ ಪ್ರತಿ ತರಗತಿಕೋಣೆಗಳಲ್ಲಿ ಕ್ಲಾಸ್ ಟೀಚರ್ ಓದಿ ಹೇಳಿದ ನಂತರ ಪಾಸ್ ಆದವರನ್ನು ಇನ್ನೊಂದು ಕೋಣೆಗೆ ಕಳಿಸಿ, ಪೇಲ್ ಆದವರನ್ನು ಅಲ್ಲಿಯೇ ಕೂರಿಸುವುದು ಅಂದಿನ ಪದ್ದತಿ. ಪಾಸ್ ಆದವರ ಚೀರಾಟ, ಪೆಲ್ ಆದವರ ಕೂಗಾಟ ತರಗತಿಯಿಂದ ಹಿಡಿದು ದಾರಿಯುದ್ದಕ್ಕೂ ಮನೆತನಕ ನಡೆಯುತ್ತಿತ್ತು. ಏಳನೇ ತರಗತಿಗೆ ನಮೆಗೆಲ್ಲರಿಗೂ ಆಗ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆಇತ್ತು. ರ್ಯಾಂಕ್‍ಗಳನ್ನು ಘೋಸಿಸುತ್ತಿದ್ದರು. ನೆರೆಹೊರೆಯ ಆನೇಕ ಶಾಲೆಯ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಬರೆಯಲು ನಮ್ಮ ಶಾಲೆಗೆ ಬರಬೇಕಾಗಿತ್ತು. ಪೇಲ್ ಆದ ಆನೇಕರಿಗೆ ಶಾಲೆಯ ದಿನಚರಿ ಅಲ್ಲಿಗೆ ಮುಗಿಯುತ್ತಿತ್ತು. ಅವರಲ್ಲಿ ಹೆಚ್ಚಿನವರು ಕೃಷಿಕೆಲಸಕ್ಕೆ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳುವುದು ಅಗಿನ ವಾಡಿಕೆ. ಶಿಕ್ಷಣದಿಂದ ಸಾಧಿಸುವುದು ಅಷ್ಟೇ ಎಂಬ ಮನೋಸ್ಥಿತಿ ಆಗ ನಮ್ಮೂರಲ್ಲಿ ಆನೇಕ ಹಿರಿಯರಿಗೆ ಇತ್ತು ಎಂಬ ಅನುಮಾನ ನನ್ನದು. ಆಥವಾ ಮನೆಯಲ್ಲಿ ತುಂಬಾ ಮಕ್ಕಳಿದ್ದ ಆ ಕಾಲದಲ್ಲಿ ಪೇಲ್ ಆದವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಎಲ್ಲೂ ಗೋಚರಕ್ಕೆ ಬರುತ್ತಿರಲಿಲ್ಲಾ!

 

ಹಿರಿಯರ ನಿವೃತ್ತಿ - ಹೊಸಬರ ಸೇರ್ಪಡಿಕೆ:

ನಾನು ಶಾಲೆಯಲ್ಲಿದ್ದ ಏಳು ವರ್ಷಗಳಲ್ಲಿ (1971 ರಿಂದ 1978) ಅನೇಕ ಹಿರಿಯ ಶಿಕ್ಷಕರು ನಿವೃತ್ತಿಯಾಗಿದ್ದು ಆವರ ಸ್ಥಳದಲ್ಲಿ ಹೊಸಬರು ಬಂದಿದ್ದೂ ನೆನಪಿದೆ. ಒಂದು ವರ್ಷ ಒಮ್ಮೇಲೆ ಐದು ಮಂದಿ ನಿವೃತ್ತಿಯಾಗಿ ಆಮೇಲೆ ಸ್ವಲ್ಪ ದಿವಸದಿಂದ ಪುನಃ ಸೇವೆಯಲ್ಲಿ ಮುಂದುವರಿದದ್ದೂ ನೆನಪಿದೆ. ಸರಕಾರ ಸೇವಾನಿವೃತ್ತಿ ವಯಸ್ಸನ್ನು 58/60( ಸರಿ ನೆನಪಿಲ್ಲಾ) ರಿಂದ 55 ಕ್ಕೆ ಇಳಿಸಿ ಆಮೇಲೆ ಸ್ಚಲ್ಪ ದಿವಸದನಂತರ ಮತ್ತೆ 58 ಮಾಡಿದ್ದು ಇದಕ್ಕೆಲ್ಲಾ ಕಾರಣವಾಗಿತ್ತು. ಈ ಮದ್ಯೆ ಪೆಲಿಕ್ಸ್ ಮಾಸ್ಟರ್ (ದಿ. ಪೆಲಿಕ್ಸ್ ಮಥಾಯಸ್),  ದುಜೆ ಮಾಸ್ಟರ್ (ದಿ. ಜೋಸೆಪ್ ಡಿಸೋಜಾ), ಲಾರೆನ್ಸ್ ಮಾಸ್ಟರ್ ( ದಿ. ಲಾರೆನ್ಸ್ ಡಿಸೋಜಾ), ಶಿಲಾ ಮಾಸ್ಟರ್ (ದಿ, ಸಿಲ್ವೇಸ್ಟರ್ ಕ್ಯಾಸ್ತೆಲೀನೊ) ಇಟ್ಟು ಮಾಸ್ಟರ್ (ದಿ. ಹಿಲಾರಿ ಮಾರ್ಟಿಸ್) ಸೇವಾನಿವೃತ್ತಿ ಹೊಂದಿದ್ದರು. ಹೊಸಬರಾಗಿ              ಶ್ರೀ ರಪಾಯೆಲ್ ಆರಾನ್ಹ, ಶ್ರೀ ಸಿಲ್ವೇಸ್ಟರ್ ಮಥಾಯಸ್, ಕುಮಾರಿ ಲೀನಾ ಸಿಕ್ವೇರಾ, ಶ್ರೀಮತಿ ಲಿಲ್ಲಿ ಸಿಕ್ವೇರಾ/ಲೋಬೊ, ಕುಮಾರಿ ಕ್ಲೇರಾ ಮಾಥಾಯಸ್ ಶಿಕ್ಷಕರಾಗಿ ಶಾಲೆಗೆ ಸೇರಿದ್ದು ನೆನಪಿದೆ. ಇದರಲ್ಲಿ ಯಾವಗಲೂ ಶಿಕ್ಷಕರ ದಿವಸದ ಕಾರ್ಯಕ್ರಮದಲ್ಲಿ "ಮಾಸ್ಟರ್ - ಟೀಚರ್ ಆಲಗ್ ಹೆ; ಫಿರ್ ದೊನೊಂಕಾ ಮತ್ಲಾಬ್ ಎಕ್ ಹೆ" ಎಂದು ಹಾಡುತ್ತಿದ್ದ ಶ್ರೀ ರಪಾಯೆಲ್ ಆರಾನ್ಹ ಅವರು ಕುಮಾರಿ ಲೀನಾ ಸಿಕ್ವೇರಾರವರನ್ನು ಮದುವೆಯಾಗಿ ದೊನೊಂಕಾ ಮತ್ಲಬ್ ಎಕ್ ಆದದ್ದು ನೆನಪಿದೆ!

 

ದೈನದಿಂನ ಚಟುವಟಿಕೆಗಳು -ಕಿರು ಅವಲೋಕನ

ಪ್ರಾಥಮಿಕ ಶಾಲಾದಿನಗಳ ದಿನನಿತ್ಯದ ಚಟುವಟಿಕೆಗಳು ಹತ್ತು ಹಲಾವಾರು ಇರುತ್ತಿದ್ದವು. ನೆನಪಿನಂಗಳದಲ್ಲಿ ಸದಾ ಗುಣುಗುತ್ತಿರುವ ಕೆಲವು ನಮ್ಮೆಲ್ಲರ ದಿನನಿತ್ಯದ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಹಬಾಳ್ವೆಗೆ ಸಹಕಾರಿಯಾಗಿವೆ. ಬೆಳಿಗ್ಗೆ ನಡೆಯುವ ಅಸೆಂಬ್ಲಿ ವಿಶಿಷ್ಟವಾದುದು. ಎಲ್ಲಾ ಮಕ್ಕಳೂ ಸಾಲಾಗಿ ಅಸೆಂಬ್ಲಿಗೆ ಬರುವುದು, ತರಗತಿವಾರು ನಿಂತುಗೊಳ್ಳುವುದು, ಪ್ರಾರ್ಥನೆಯಾಗಿ "ಜಗದ ಜನಕ ನಮಗೆ ಬೆಳಕ ತೋರು ಕರುಣೆಯೆ..." ಗೀತೆ ಹಾಡುವುದು, ಸರದಿ ಪ್ರಕಾರ ಪ್ರತಿಶಿಕ್ಷಕರು ಬೇರೆ ಬೇರೆ ದಿವಸ ನೀತಿ ಬೋದಕ ಕಥೆಹೇಳುವುದು, ಈ ನಡುವೆ ಒಬ್ಬರಿಬ್ಬರಿಗೆ ಅಧ್ಯಾಪಕರಿಂದ ಪೆಟ್ಟು, ಕುಟ್ಟಿ ಅಥವಾ ಚಿಮಟೆ ಪೂಜೆಯು ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಮಕ್ಕಳೂ ಬೆಳಿಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡು ಬರುತ್ತಿದ್ದೆವು. ವರ್ಕ್ ಎಕ್ಸ್‍ಪೀರಿಯನ್ಸ್ ಪಿರಿಯೆಡ್ ಸಮಯದಲ್ಲಿ ಶಾಲೆಯ ಹಿಂದಿನ ಮಣ್ಣನ್ನು ಶಾಲಾ ಮುಂದಿನ ತಗ್ಗು ಪ್ರದೇಶಕ್ಕೆ ಹಾಕಿ ಶಾಲೆಯ ಮುಂಭಾಗದ ಮೈದಾನವನ್ನು ವಿಸ್ತರಿಸಲು ನಾವೆಲ್ಲಾ ಶ್ರಮಧಾನ ಮಾಡಿದ್ದೂ ನೆನಪಿದೆ. ಆಟಗಳಲ್ಲಿ ಕೋಕೋ ಆಟ ಪ್ರಮುಕವಾಗಿ ಆಡುತ್ತಿದ್ದ ನೆನಪು. ಮಧ್ಯಹ್ನ 30 ನಿಮಿಷದ "ಸ್ಟಡಿ ಆವರ್" ಒಳ್ಳೆಯ ಮಕ್ಕಳಿಗೆ ಆಭ್ಯಾಸ ಮಾಡಲು ಮತ್ತು ಇತರರಿಗೆ ಶಿಕ್ಷಕರಿಂದ ಪೆಟ್ಟು ತಿನ್ನಲು ಅಥವಾ ಹೆಚ್ಚಿನ ಮನೆಕೆಲಸ ಶಿಕ್ಷೆಯ ರೂಪದಲ್ಲಿ ಪಡೆಯಲು ಮೀಸಲಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸಾಕಷ್ಟು ಅವಕಾಶಗಳಿದ್ದವು. ಅದರಲ್ಲಿ ನನಗೆ ಸದಾ ನೆನಪಿನಲ್ಲಿ ಇರುವಂತದ್ದು ಚರ್ಚಾ ಸ್ಫರ್ಧೆ ಮತ್ತು ಅದರ ವಿಷಯಗಳು- ಹುಲ್ಲಿನ ಮಾಡಿನ ಮನೆ ಮೇಲೋ - ಹಂಚಿನ ಮಾಡಿನ ಮನೆ ಮೇಲೋ; ಹಳ್ಳಿ ಮೇಲೋ - ಪಟ್ಟಣ ಮೇಲೋ; ಬೇಸಾಯ ಮೇಲೋ – ಕೈಗಾರಿಕೆ ಮೇಲೋ. ಅದರ ಜೊತೆಗೆ ಶಾಲೆಯ ವಾರ್ಷಿಕೋತ್ಸವ , ಕ್ರೀಡೋತ್ಸವ, ಮತ್ತು ಇತರ ಸಮಾರಂಭಗಳಲ್ಲಿ ಮಕ್ಕಳಿಗೆ ಒಂದಲ್ಲ ಒಂದು ರೀತಿಯ ಪಾತ್ರ ಇರುತ್ತಿತ್ತು.

 

ಶಿಸ್ತು ಶಾಲೆಯ ಮುಖ್ಯ ಮೌಲ್ಯವಾಗಿತ್ತು ಅಂತ ನನ್ನ ನಂಬಿಕೆ. ಅದು ಪೈಸೆಗಳ ಕಾಲ, ನೋಟಿನ ಹಣ ದೊಡ್ಡ ಹಣ, ನಮ್ಮೆಲ್ಲರ  ಕೈಗೆಟಕದ ಹಣ. ಒಂದು ಪೈಸೆ, ಎರಡು ಪೈಸೆ, ಮೂರು ಪೈಸೆ, ಐದು ಪೈಸೆ ಹಾಗೂ ಹತ್ತು ಪೈಸೆಗೆ ಒಳ್ಳೆಯ ಮೌಲ್ಯವಿತ್ತು, ಮಕ್ಕಳಿಗೆ ಬೇಕಾದ ಆನೇಕ ತಿಂಡಿ-ತಿನುಸು ಮತ್ತು ಐಸ್‍ಕ್ಯಾಂಡಿ -ದೂದ್‍ಕ್ಯಾಂಡಿ ಮುಂತಾದುವು ಈ ಪೈಸೆ ಹಣದಲ್ಲಿ ಸಿಗುತ್ತಿತ್ತು. ಆದರೆ ಹಣದವಿಷಯದಲ್ಲಿ ಶಾಲೆಯ ನಿಯಮ ಮಾತ್ರ ಕಟ್ಟನಿಟ್ಟಿನ ಆಜ್ಞೆಯಾಗಿತ್ತು. ಯಾರದಾರು ಶಾಲೆಗೆ ಹಣ ತಂದರೆ, ಶಾಲಾ ಆವರಣ ಬಿಟ್ಟು ಪೇಟೆಕಡೆ ಹೋದರೆ, ಪೇಟೆಯಲ್ಲಿ ಹಣವನ್ನು ಖರ್ಚು ಮಾಡುವುದು ಗೊತ್ತಾದರೆ, ಆ ವಿದ್ಯಾರ್ಥಿಯ ಕತೆ ಮುಗಿಯುತು ಅಂತ ಲೆಕ್ಕ. ತುರ್ತ್ ಪರಿಸ್ಥಿತಿಯ ಕಾಲವದು, ಶಾಲೆಯಲ್ಲಿನ ತುರ್ತ್ ಪರಿಸ್ಥಿತಿ ಗೌರವಾನ್ವಿತ ಸದಾನಂದ ಮಾಸ್ಟರ್‍ರವರ ಮುಂದಾಳುತನದಲ್ಲಿ ದೇಶದ ತುರ್ತ್ ಪರಿಸ್ಥಿತಿಗಿಂತ ಬಿಗಿಯಾಗಿತ್ತು ಅಂತ ನನ್ನ ಭಾವನೆ. ನಿಯಮ ಉಲ್ಲಂಗಿಸಿದರೆ ದೂರು ಕೊಡಲು ಕಾತುರದಿಂದ ಕಾಯುವ ಒಂದು ಸಣ್ಣವಿದ್ಯಾರ್ಥಿವೃಂದ ಕೂಡ ಸದಾ ರೆಡಿ ಇರುತ್ತಿತ್ತು. ಸಿಕ್ಕಿ ಬಿದ್ದರೆ ಶಿಕ್ಷೆ ಖಂಡಿತವಾಗಿತ್ತು. ಶಿಕ್ಷೆಯಾಗಿ ಪೆಟ್ಟು ಸಾಮಾನ್ಯವಾಗಿತ್ತು ಆದರೆ ಪೆಟ್ಟು ಕೊಡುವ ರೀತಿ ಶಿಕ್ಷೆ ಕೊಡುವ ಶಿಕ್ಷಕರನ್ನು ಆವಲಂಬಿಸಿರುತ್ತಿತ್ತು. ಹೆಡ್‍ಮಾಸ್ಟರ್ ಆದರೆ ದೊಡ್ಡ ಕೋಲಿನಿಂದ ಕೈಗೆ ಪೆಟ್ಟು, ಸದಾನಂದ ಮಾಸ್ಟರ್ ಮತ್ತು ರಪಾಯೆಲ್ ಮಾಸ್ಟರ್ ಆದರೆ ಬೆನ್ನಿಗೆ ಗುದ್ದು ಅಥವಾ ಏಟು, ತಂತ್ರಿ ಮಾಸ್ಟರ್‍ರಿಂದ ತಲೆಗೆ ಕುಟ್ಟಿ, ವಿಲ್ಲಿ ಮಾಸ್ಟರ್‍ರಾದರೆ ಕಿವಿ ಹಿಂಡುವುದು, ಇತರ ಶಿಕ್ಷಕರಾದರೆ ಬೆನ್ನಿಗೆ ಏಟು, ಬೆತ್ತ ಆಥವಾ ಮರದ ಆಡಿಕೋಲಿನಿಂದ ಬಾರಿಸುವಿಕೆ. ಬಹುಷ ಪೆಟ್ಟು ಇಲ್ಲದೆ ಶಿಸ್ತು ಇಲ್ಲ ಅಂತ ನಂಬಿದ ಕಾಲ ಆದು. ಆ ಕಾಲದ ತುಂಬಾ ಮಂದಿ ವಿದ್ಯಾರ್ಥಿಗಳಿಗೆ ಹಣವೆ ಸಿಗುತ್ತಿರಲಿಲ್ಲಾ, ಎಲ್ಲಿಯಾದರೂ ಸಿಕ್ಕಿ, ಸಾಹಸಿಗರಾಗಲು ಸಿಕ್ಕ ಹಣವನ್ನು ಶಾಲೆಗೆ ತರುವ ಆಧಿಕ ಪ್ರಸಂಗಮಾಡಿ, ಸಿಕ್ಕಿಬಿದ್ದರೆ ಮುಗಿಯುತ್ತಿತ್ತು ಅವರ ಕಥೆ. ಇಂದು ಪೈಸೆಗಳೂ ಇತಿಹಾಸ ಸೇರಿವೆ, ಬಹುಷ ಶಿಕ್ಷಕರ ಪೆಟ್ಟುಗಳು ಕೂಡ ಇತಿಹಾಸ ಸೇರಿವೆ ಅಂತ ನನ್ನ ಅನಿಸಿಕೆ!

 

ವಾರ್ಷಿಕ ಕ್ರೀಡೋತ್ಸವ -ಒಲಿಂಪಿಕ್ಸ್‍ನ ಪ್ರತಿರೂಪ:

ಶಾಲೆಯಲ್ಲಿ ಯಾವುದೇ ಚಟುವಟಿಕೆ ಇರಲಿ ಅದು ಆಚ್ಚುಕಟ್ಟಾಗಿ, ವ್ಯವಸ್ತಿತವಾಗಿ, ಶಿಸ್ತು ಬದ್ದವಾಗಿಯೇ ನಡೆಯುತ್ತಿತ್ತು. ವಾರ್ಷಿಕ ಕ್ರೀಡೋತ್ಸವ ಮತ್ತು ಅದಕ್ಕೆ ಸಂಬÀದಿಸಿದ ಚಟುವಟಿಕೆಗಳು ಇಂದಿಗೂ ನನ್ನ ಸೃತಿಪಟಲದಲ್ಲಿ ಭದ್ರವಾಗಿದೆ. ಕ್ರೀಡೋತ್ಸವ ಹೈಸ್ಕೂಲ್ ಮೈದಾನದಲ್ಲಿ ಜರುಗುತ್ತಿತ್ತು. ಕ್ರೀಡಾಸ್ಪರ್ಧಿಗಳು ವಿವಿಧ ಗ್ರಹಗಳಾಡಿಯಲ್ಲಿ ಸ್ಪರ್ಧಿಸುತ್ತಿದ್ದರು. ಕ್ರೀಡೋತ್ಸವದ ಉದ್ಗಾಟನಾ ಕಾರ್ಯ ಒಂದು ಆಮೂಲ್ಯವಾದ ಅನುಭವ. ಇಗರ್ಜಿ ಪಕ್ಕದ ಕ್ರಾಸ್‍ಹಿಲ್‍ನಲ್ಲಿ ಭೂತಕನ್ನಡಿಯ ಮೂಲಕ ಸೂರ್ಯನ ಕಿರಣಗಳನ್ನು ಪಸರಿಸಿ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಅಲ್ಲಿಂದ ಕ್ರೀಡಾಸ್ಫರ್ಧಿಗಳು ಸರದಿಯಂತೆ ಕ್ರೀಡಾಉಡುಗೆಯಲ್ಲಿ ಸುಮಾರು ಒಂದು ಕೀ.ಮಿ. ದೂರದ ದಾರಿಯನ್ನು ಕ್ರಮಿಸಿ  ಕ್ರೀಡಾಂಗಣಕ್ಕೆ ಬಂದು, ಕ್ರೀಡಾಂಗಣಕ್ಕೆ ಸುತ್ತು ಹೊಡೆದು, ಕ್ರೀಡಾಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡೋತ್ಸವದ ಆರಂಭವಾಗುತ್ತಿತ್ತು. ಟಿ.ವಿ. ಇಲ್ಲದ ಆ ಕಾಲದಲ್ಲಿ ಒಲಿಂಪಿಕ್ಸ್ ಕ್ರೀಡೆಗಳನ್ನು ಅಂದಾಜಿಸಲು ಈ ಕ್ರೀಡೋತ್ಸವ ನಮಗೆ ಸಹಕಾರಿಯಾಗಿತ್ತು. ಕ್ರೀಡಾಂಗಣದ ರಸ್ತೆಬದಿಯಲ್ಲಿನ ಮಾವಿನ ಮರದ ಕೆಳಗೆ ಕೂತು ಚಪ್ಪಾಳೆ ತಟ್ಟುವುದೆ ನನ್ನಂತಹ ಆನೇಕ ಮಕ್ಕಳ ಕೆಲಸವಾಗಿತ್ತು. ಒಂದೆರೆಡು ಸಲ ಸ್ವಂಸೇವಕನಾಗಿ ಕ್ರೀಡಾ ಸ್ಫರ್ಧಿಗಳಿಗೆ ನೀರು ಕುಡಿಸಿದ್ದು, ಹೈಜಂಪಿನ ಆಡ್ಡಕೋಲನ್ನು ಕಂಬದಲ್ಲಿರಿಸಿದ್ದೂ ನೆನಪಿದೆ!

 

ಶಾಲಾ ಮಂತ್ರಿ ಮಂಡಳ - ನೀರಾವರಿ ಮಂತ್ರಿಯಾಗಿ ಶಪÀಥ:

ಪ್ರಜಾ-ಪ್ರಭುತ್ವದ ಪ್ರಕ್ರಿಯೆ, ಮೌಲ್ಯಗಳು, ಕಾರ್ಯವೈಕರಿ ಹಾಗೂ ತತ್ವಗಳನ್ನು ವಿದ್ಯಾರ್ಥಿಗಳಿಗೆಲ್ಲಾರಿಗೆ ಪರಿಚಯಿಸಲು ಶಾಲಾ ಮಂತ್ರಿ ಮಂಡಳದ ರಚನೆಯಾಗುತ್ತಿತ್ತು. ಶಾಲಾ ಚುನಾವಣೆಯಲ್ಲಿ ವಿಜಯಿಯಾದವನು/ಳು ಮುಖ್ಯಮಂತ್ರಿಯಾದರೆ, ಸೋತವನು/ಳು ವಿರೋಧ ಪಕ್ಷದ ನಾಯಕನಾಗುತ್ತಿದ್ದನು. ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲು ವಿವಿಧ ಮಂತ್ರಿಗಳ ನೇಮಕವಾಗುತ್ತಿತ್ತು. ಮಂತ್ರಿಗಳು ಆಡಳಿತ ಪಕ್ಷದವರಾಗುತ್ತಿದ್ದರು. ವರ್ಷಕ್ಕೆ ಎರಡು ಸಲ ಮಂತ್ರಿಮಂಡಳದ ಬದಲಾವಣೆಯಾಗುತ್ತಿತ್ತು. ಹೆಡ್‍ಮಾಸ್ಟರ್ ರಾಜ್ಯಪಾಲರಾಗಿರುತ್ತಿದ್ದರು. ಹಿರಿಯ ವಿದ್ಯಾರ್ಥಿಗಳನ್ನು ನೋಡಿ ಕಿರಿಯ ವಿದ್ಯಾರ್ಥಿಗಳು ಮಂತ್ರಿಮಂಡಳದ ಕಾರ್ಯವೈಕರಿಯನ್ನು ತಿಳಿದುಕೊಳ್ಳುತ್ತಿದ್ದರು. ಏಳನೇ ತರಗತಿಯಲ್ಲಿರುವಾಗ ಆಕಸ್ಮಿಕವಾಗಿ ನನ್ನನ್ನು ನೀರಾವರಿ ಮಂತ್ರಿಮಾಡಲಾಯಿತು. ಆ ಆರು ತಿಂಗಳೂ ನೀರಾವರಿಯ ಜವಾಬ್ದಾರಿ ನಿರ್ವಹಿಸಿದ ಎಲ್ಲಾ ಗ್ರಹಗಳಿಗೆ ಹತ್ತರಲ್ಲಿ ಹತ್ತು ಆಂಕಗಳು ದೊರೆತು, ನೀರಾವರಿ ವಿಭಾಗ ಅತ್ಯುತ್ತಮ ಖಾತೆ ಎಂದು ಸಾರಲಾಗಿತ್ತು. ನನ್ನ ಪಾಲಿಗೆ ನಾಯಕತ್ವದ ಮೊದಲ ಅವಾಕಾಶ ಮತ್ತು ಅನುಭವ ಅದು. ಅಲ್ಲಿಂದ ಇಂದಿನವರೆಗೆ ಆನೇಕ ಸಾರ್ವಜನಿಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ, ನಿರ್ವಹಿಸುತ್ತಾ ಇದ್ದೇನೆ, ಎಳೆ ಬಾಲಕನಾಗಿ ಅಂದು ನನ್ನ ಶಾಲೆಯಲ್ಲಿ ಆಕಸ್ಮಿಕವಾಗಿ ಬಯಸದೆ ಬಂದ ನಾಯಕತ್ವ, ನಾನು ಮಾಡಿದ ನನ್ನ ಕರ್ತವ್ಯದ ನಿರ್ವಹಣೆ, ಶಿಕ್ಷಕರಿಂದ, ಹೆಡ್‍ಮಾಸ್ಟರ್‍ರವರಿಂದ ಹಾಗೂ ನನ್ನ ಸಹಪಾಠಿಗಳಿಂದ ಕೇಳಿದ ಪ್ರಶಂಶೆÀನೆಯ ನುಡಿಗಳು, ಮೆಚ್ಚುಗೆಯ ಮಾತುಗಳು ನನ್ನಲ್ಲಿ ಆತ್ಮ ವಿಶ್ವಾಸ, ಪ್ರಮಾಣಿಕತೆ, ಜವಾಬ್ದಾರಿಯ ನಿರ್ವಹಣೆಯಲ್ಲಿ ದೃಡತೆ, ಶಿಸ್ತು, ಕಾರ್ಯತತ್ಪರತೆ ಹಾಗು ಬದ್ದತೆಯನ್ನು ಒಳಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ತದನಂತರ ಸಿಕ್ಕಿದ ಅವಾಕಶಗಳನ್ನು ಸಂಬÀದಿಸಿದ ಎಲ್ಲಾರಿಗು ಆನೂಕೂಲವಾಗುವಂತೆ ಕಾರ್ಯನಿರ್ವಹಿಸಲು ಈ ನನ್ನ ಶಾಲಾ ಅನುಭವ ಭದ್ರಬುನದಿ ಹಾಕಿದೆ ಎಂದು ನನ್ನ ನಂಬಿಕೆ. ಆ  ಆವಾಕಾಶ ನೀಡಿದ ಮತ್ತು ನನ್ನನ್ನು ತರಬೇತುಗೊಳಿಸಿದ ನನ್ನೆಲ್ಲಾ ಗುರುಗಳಿಗೆ ನನ್ನ ಅನಂತ ಆನಂತ ನಮನಗಳು.

 

ಶತಮಾನೋತ್ಸವದ ಸಂಭ್ರಮ  - ಅನಿಶ್ಚತೆಯ ಭವಿಷ್ಯ

ಈ ಪರಿಸರದ ಗ್ರಾಮೀಣ ಸೊಬಗನ್ನು ಮೆಳೈಸಿ "ಸರ್ವಧರ್ಮ ದೇಗುಲವಾಗಿ" ಜಾತಿ -ಮತ - ಧರ್ಮದ ಬೇದಭಾವ ವಿಲ್ಲದೆ, ಮೇಲು -ಕೀಳು ಎಂಬ ತಾರತಮ್ಯ ತೋರದೆ, ಸಿರಿವಂತ- ಬಡವ ಎಂಬ ಅಂತರ ಕಾಪಡದೆ, ಯಾವುದೇ ರೀತಿಯ ಕೀಳರಿಮೆ, ಗರಿಮೆ ತೋರಿಸದೆ, ಮಾನವ ಧರ್ಮ, ನಮ್ಮ ಮಕ್ಕಳು, ನಮ್ಮೂರ ಶಾಲೆ ಎಂಬ ವಿಶಾಲ ಮತ್ತು ಮಾನವೀಯ ಮನೋಭಾವನೆಯಿಂದ ವಿದ್ಯಾಧ್ಯಾನ ನೀಡುತ್ತಿರುವ ನಮ್ಮೆಲ್ಲರ ಇಗರ್ಜಿಶಾಲೆ  ಶತಮಾನೋತ್ಸವ ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಮುಂದೆ ಈ ಶಾಲೆಯ ಭವಿಷ್ಯವೇನು ಎಂಬ ಪ್ರಶ್ನೆ ಕೆಣಕುತ್ತಿದೆ. ಇಪ್ಪತೈದು ವರ್ಷಗಳ ಹಿಂದೆ ಅಮೃತೋತ್ಸವ ಆಚರಣೆಯ ಸಂದರ್ಭದಲ್ಲಿ ಇಂತಹ ಪ್ರಶ್ನೆ ಯಾರ ಕನಸು-ಮನಸಲ್ಲೂ ಉದ್ಭವಿಸಿರಿಲಿಕಿಲ್ಲಾ ಆಂತ ನನ್ನ ದೃಡ ನಂಬಿಕೆ. ಶತಮಾನಗಳ ಕಾಲ ಕೊಂಕಣಿ, ತುಳು, ಮರಾಠಿ ಹಾಗೂ ಇತರ ಉಪಭಾಷೆಗಳನ್ನಾಡುವ ಈ ಪರಿಸರದ ಮಕ್ಕಳಿಗೆ ಕನ್ನಡ ಓದು-ಬರಹದ ಜೊತೆಗೆ, ಇಂಗ್ಲಿಷ್, ಹಿಂದಿ ಭಾಷೆÉಗಳನ್ನು ಕಲಿಸಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣನೀಡಿದ  ಮತ್ತು ಮುಖ್ಯವಾಗಿ ಜೀವನದ ಆಗತ್ಯ ಕೌಶಲ್ಯಗಳನ್ನು ಜೀವಂತ ಉದಾಹರಣೆಗಳೊಂದಿಗೆ ಭೋದಿಸಿದ, ಸಂಯಮ, ಶಿಸ್ತು, ಮೌಲ್ಯಗಳನ್ನು ಧಾರಳವಾಗಿ ಪ್ರತಿಯೊರ್ವರಿಗೂ ಧಾರೆ ಎರೆದ ನಮ್ಮೀ ಶಾಲೆ, ಇಂದು ಮಕ್ಕಳ ಕೊರತೆಯಿಂದ ನಿಧಾನವಾಗಿ ಅವನತಿಯ ಕಡೆಗೆ ಜಾರುತ್ತಿದೆ. ಉತ್ತಮ ಶಿಕ್ಷಕರು, ವಿಶಾಲವಾದ ಶಾಲೆಯ ಆವರಣ, ಹೊರಾಂಗಣ ಮೈದಾನ, ಪ್ರಗತಿಪರ ಆಡಳಿತ ಮಂಡಳಿ ಮತ್ತು ಸದಾ ತನು-ಮನ-ಧನ ನೀಡಿ ಶಾಲಾ ಪ್ರಗತಿಗೆ ಸಹಾಯ ಮಾಡುವ ಸಹೃದಯಿ ಸ್ಥಳೀಯ ನಾಗರಿಕರ ಸಹಕಾರವಿದ್ದರೂ, ಮಕ್ಕಳಿಂದ ತುಂಬಿತುಳುಕುತ್ತಿದ್ದ ನಮ್ಮೀ ಶಾಲೆ ಇತಿಹಾಸ ಸೇರುವ ಕಾಲ ಸನ್ನಿಹಿತವಾದಂತೆ ಗೋಚರಿಸುತ್ತದೆ. ಸಮಾಜದಲ್ಲಿ ಆಗುತ್ತಿರುವ ಹಲವು ಪ್ರತಿಕ್ರಿಯೆಗಳು ಇದಕ್ಕೆ ಕಾರಣವಾಗಬಹುದು. ಸಣ್ಣ ಕುಟಂಬಗಳು ಮತ್ತು ಇದರಿಂದ ಕುಸಿತಗೊಂಡಿರುವ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ. ಹೊಸತಾಗಿ ಅಲ್ಲಲ್ಲಿ ಪ್ರಾರಂಭಿಸಲ್ಪಟ್ಟ ಪ್ರಥಾಮಿಕ ಶಾಲೆಗಳು. ಜಾಗತೀಕ ಉದ್ಯೋಗ ಕ್ಷೇತ್ರದ ಅಗತ್ಯಗಣುಗುಣಾವಾಗಿ ಎಲ್ಲಾ ಪೋಷಕರು ಬಯಸುವ ಆಂಗ್ಲ ಮಾಧ್ಯಮಾ ಶಾಲೆಗಳು ಮತ್ತು ಪರಿಸರದಲ್ಲಿ ಆಂಗ್ಲ ಮಾಧ್ಯಮಾ ಶಾಲೆಗಳ ಲಭ್ಯತೆ. ಉತ್ತಮ ಸಾರಿಗೆ-ಸಂಪರ್ಕ ವ್ಯವಸ್ಥೆ ಮತ್ತು ಆದರ ಫಲವಾಗಿ ಉಡುಪಿ ಮತ್ತು ಆಸುಪಾಸಿನ ಹಳೆಯ ಆಂಗ್ಲಮಾಧ್ಯವi ಶಾಲೆಗಳಿಗೆ ಮಕ್ಕಳ ಸೇರ್ಪಡೆ ಹಾಗೂ ನಗರ ಪ್ರದೇಶಗಳಿಗೆ ವಲಸೆಹೋಗುತ್ತಿರುವ ಸ್ಥಳಿಯರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣವಾಗಿವೆ.

 

ನಾವು ಕಲಿತ ಶಾಲೆಯ ಆನಿಶ್ಚಿತತೆಯ ಭವಿಷ್ಯದ ಕುರಿತು ಯೋಚಿಸುವಾಗ ಸಹಜವಾಗಿಯೂ ಬೇಸರ ಹಾಗೂ ನೋವಿನ ಅನುಭವವಾಗುತ್ತದೆ. ಮುಂದೇನು? ಶಾಲೆ ಉಳಿಯುತ್ತದ ಇಲ್ಲಾವಾ? ಪ್ರಶ್ನೆಗಳ ಸರಮಾಲೆಯೆ ನಮ್ಮ ಮುಂದಿದೆ. ನಮ್ಮ ಕುಟುಂಬದ ಮೂರು ತಲೆಮಾರಿಗೆ - ನನ್ನ ತಂದೆ ಮತ್ತು ಅವರ ಸೋದರ-ಸೋದರಿಯರು, ನಾವು ಆರು ಮಂದಿ ಸೋದರ-ಸೋದರಿಯರು, ನಮ್ಮೂರಿನಲ್ಲಿರುವ ನನ್ನ ಇಬ್ಬರು ಅಣ್ಣಂದಿರ ಒಟ್ಟು ನಾಲ್ಕು ಮಕ್ಕಳು ಈ ಶಾಲೆಯ ಹಳೆ ವಿದ್ಯಾರ್ಥಿಗಳು. ನಾಲ್ಕನೇಯ ತಲೆಮಾರಿನವರು ಈ ಶಾಲೆಗೆ ಬರುವುದು ಖಂಡಿತವಾಗಿಯೂ ಸಂಶಯ. ಈ ಪರಿಸರದ ಎಲ್ಲಾ ಕುಟುಂಬಗಳಲ್ಲಿ ಬಹುಷ ಇದೇ ಪರಿಸ್ಥಿತಿ. ಬದಲಾವಣೆ ಒಂದು ನಿರಂತರ ಪ್ರಕ್ರಿಯೆ. ಕಳೆದ ಎರಡು ದಶಕಗಳಿಂದೀಚೆಗೆ ಬದಲಾವಣೆಯ ವೇಗ ಮತ್ತು ಸ್ವರೂಪದಲ್ಲಿ ಕ್ರಾಂತಿಕಾರಿಕವಾದ ಬದಲಾವಣೆಯಾಗಿದೆ. ಬದಲಾವಣೆಯ ಇತಿ-ಮಿತಿ, ಆಶೆ-ಆಕಾಂಕ್ಷೆಗಳು, ಅಗತ್ಯತೆ ಮತ್ತು ಆವಾಕಾಶಗಳನ್ನು ಅರಿತು ಸಮಯz, ಇಂದಿನ ಸಮಾಜದÀ ಮತ್ತು ಸ್ಥಳೀಯ ಜನರ ಆಗತ್ಯಗಣುಗುಣಾವಾಗಿ ಈ ಶಾಲೆಯ ಪರಿವರ್ತನೆಯಾಗಲಿ ಎಂದು ಆಶಿಸುತ್ತೇನೆ. ಶಾಲೆಯ ಆಡಳಿತ ಮಂಡಳಿ ಮತ್ತು ಸೇವೆಯಲ್ಲಿರುವ ಶಿಕ್ಷಕರು ಈ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ಆಶಾಭಾವ ನನ್ನದು.

 

ನನ್ನ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಜೀವನಕ್ಕೆ ಭದ್ರ ತಳಪಾಯಿಯನ್ನು ಹಾಕಿ, ಉತ್ತಮ ನಾಗರೀಕನಾಗಿ, ಯಾವುದೇ ಕೀಳರಿಮೆಗೆ ಒಳಪಡಲು ಬಿಡದೆ, ಸ್ವತಂತ್ರವಾಗಿ ಮತ್ತು ಸಾಮಾಜಿಕ ಸ್ಫಂದನೆಯ ಕಾಳಜಿ ನೀಢಿ,  ನನ್ನನ್ನು ಬೆಳೆಯಲು ದಾರಿದೀಪತೋರಿಸಿದ ನಮ್ಮೂರಿನ ನನ್ನ ಶಾಲೆಗೆ ನಾನು ಚಿರಋಣಿಯಾಗಿದ್ದೇನೆ. "ಬೆಳ್ಳೆಯವರು ಒಳ್ಳೆಯವರು" ಎಂಬ ಮಾತು ತುಂಬಾ ಜನರಿಂದ ಕೇಳಿಸಿಕೊಂಡಿದ್ದೇನೆ. ಇದರ ಹಿಂದೆ ಈ ಶಾಲೆಯ ವಾತವರಣದ ಪ್ರಭಾವವಿದೆ, ಇಲ್ಲಿನ ಶಿಕ್ಷಕರ ಮತ್ತು ದಾನಿಗಳ ಪರಿಶ್ರಮ ಮತ್ತು ತ್ಯಾಗವಿದೆ, ಮಿಗಿಲಾಗಿ ಶಿಕ್ಷಕರ ಬಗ್ಗೆ ಎಂದೂ ಕೆಟ್ಟ ಮಾತುಗಳನ್ನಾಡದ, ಶಿಕ್ಷಕರರನ್ನು ದೇವರಂತೆ ಗೌರವಿಸಿ, ಶಿಕ್ಷಕ ವೃತ್ತಿಯ ಕುರಿತು ಸದಾ ಕೃತಾಜ್ಞಮನಸ್ಸಿನ ಹೆತ್ತವರ ಮುಗ್ದತೆಯೂ ಇದೆ. "ಶಿಕ್ಷಣದಿಂದ ಆಭಿವೃಧಿ"್ದ  ಎಂಬ ಕಾಲಘಟ್ಟವನ್ನು ದಾಟಿ "ಶಿಕ್ಷಣವೇ ಆಭಿವೃಧ್ದಿ" ಎಂಬ ಕಾಲಾಘಟ್ಟದಲ್ಲಿ ಬದುಕುವ ಇಂದಿನ ಸಮಾಜದಲ್ಲಿ ನಮ್ಮೂರಿನ ಎಲ್ಲಾ ಮಕ್ಕಳಿಗೂ ಅವರ ಬದುಕನ್ನು ರೂಪಿಸುವ ಹಾಗೂ ಅವರ ಜೀವನ ಉದ್ದೇಶಗಳನ್ನು ಈಡೇರಿಸಲು ಸಹಕಾರಿಯಾಗುವ ಸೂಕ್ತ ಶಿಕ್ಷಣ ಈ ಶಾಲೆಯ ಮೂಲಕ ನಿರಂತರವಾಗಿ ಲಭಿಸಲಿ ಆಂತ ನನ್ನ ಆಸೆ. ಮೂಡುಬೆಳ್ಳೆ, ಕಟ್ಟಿಂಗೇರಿ ಮತ್ತು ಆಸುಪಾಸಿನ ಪರಿಸರಕ್ಕೆ ತನ್ನದೇ ಆದ ಆಸ್ತಿತ್ವದ ಗುರುತು ಕೊಟ್ಟ ನಮ್ಮೀ ಶಾಲೆಯ ನೆನಪು ಚಿರಾಯುಆಗಲಿ ಅಂತ ಹಾರೈಸುತ್ತೇನೆ.

 

 

Comments on this Article
Lavina Fernandes, Moodubelle/Bangalore Thu, February-6-2014, 9:19
Congrats and thanks Dr Nobbu for creating an amazing emotional read.....This was like a sweet which u shared on behalf of all the past and present students for centenary celebration.Thank u once again.
Alex, Edmer Sun, February-2-2014, 10:46
Wow!! Dr.Norbert, well written childhood memories without missing a bit of it as it was in old days. Really interesting to read the facts once own life. When I read with the depth of my heart only tears comes out considering today s way of life. No way near. Thank you my dear a year senior to me in high school for spending your time writing this article
Florine, USA Sun, February-2-2014, 12:32
Dr. Norbert, congratulations on your beautifully articulated memories of our primary school days. Each and every word is so true. I remember for work experience class we had to go and pick cow dung for our garden and also learn how to weave rope out of coconut husks. Brilliant reminiscences!
Gururaj Bhat, bangalore Sun, February-2-2014, 12:12
You brought back all the memories of our childhood in this beautiful school. Thanks for wonderful narration. I felt as if I am walking on the school veranda once again. Thanks Dr.Lobo for your sparing valuable time and sharing your memories
Vijay Saldanha, Mumbai / Moodubelle Sun, February-2-2014, 11:42
Thanks Dr.Norbert for the wonderful article. You have narrated the difficulties of seventies and eighties. During that time this school was everything for us. But today parents have choice. Times have changed and it is for the parents and also to the school management to change with the times
Jagadish, USA Sun, February-2-2014, 5:30
I became emotional with the memories of seventies. Every word of Dr. Lobo is true.
Norbert Lobo, Mangalore Thu, January-30-2014, 6:55
Thnak you Rony for your generous praises. Hope you would remember those days how you would saved me from the drawing master by completing my drawings . One day you were absent and the drawing master made me to three rounds in the assembly ground holding the drawing book on my head!. Today if any techer punishes like that they would be in TV through out the day!
Philip Mudartha, Mumbai Wed, January-29-2014, 5:33
I read with immense pleasure, at times reading each sentence two or thee times. That is because of my poor comprehension skills. I can assure though, the time and effort I devoted to study this minor reflections was worth. I can now write and probably get pass marks in Kannada! We ll done, Norbert, kudos to you.
ROBERT CASTELINO, MOODUBELLE/BAHRAIN Wed, January-29-2014, 2:53
WELL NARRATED INFORMATIVE MEMORIES OF CHILDHOOD ACTIVITIES OF OUR PRIMARY SCHOOL WHERE WE BEGAN OUR LEARNING.GOOD TO REMEMBER ALL OUR BELOVED TEACHERS WHO PLANTED THE SEED OF KNOWLEDGE TO OUR TENDER MINDS ENCOURAGED US TO GAIN MORE TO SUCCEED IN OUR CAREER.WISHING ALL THE VERY BEST TO THE MANAGEMENT
Ronald Sabi, Moodubelle Wed, January-29-2014, 12:21
Dear Norbert, your article is too good and kind of out of the world. One among the best I read in recent years. The way you have spread your childhood memories of primary school is brilliant! I really admire your patient and time in writing this beautiful page, certainly a treat to all related to this institution. Congratulation my dear high school bench mate!
Ivan Menezes, Dubai Tue, January-28-2014, 10:51
Very interesting article from Dr. Norbert. Super liked. .
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. BelleVision.com reserves the right to block/ remove without notice any content received from users.
GTI MarigoldGTI Marigold
Anil Studio
Badminton Sports AcademyBadminton Sports Academy

Now open at Al Qusais

Veez Konkani IllustratedVEEZ Konkani

Weekly e-Magazine

New State Bank of India, Customer Service Point
Cool House ConstructionCool House Construction
Uzvaad FortnightlyUzvaad Fortnightly

Call : 91 9482810148

Your ad Here
Power Care
Ryan Intl Mangaluru
Ryan International
pearl printing
https://samuelsequeira.substack.com/publish
Omintec
Kittall.ComKittall.Com

Konkani Literature World

Konkanipoetry.com
Bluechem